ಪರಿವೀಕ್ಷಣಾ ಅವಧಿಯ ಘೋಷಣೆಗಾಗಿ ಅವಶ್ಯವಿರುವ ದಾಖಲೆಗಳು
ಸರಕಾರಿ ನೌಕರನಾಗಿ ಎರಡು ವರ್ಷಗಳ ಕಾಲ ಸೇವೆ ತೃಪ್ತಿಕರವಾದ ನಂತರ ಪ್ರತಿಯೊಬ್ಬ ಸರಕಾರಿನೌಕರ ತನ್ನ ಸೇವಾ ಭದ್ರತೆಗಾಗಿ ಪರಿವೀಕ್ಷಣಾ ಅವಧಿಯ ಘೋಷಣೆಗಾಗಿ ತನ್ನ ಗೌಪ್ಯವರಧಿ, ಇಲಾಖಾ ಪರೀಕ್ಷೆ ಅಂಕಪಟ್ಟಿ, ಕನ್ನಡ ಮಾಧ್ಯಮದ ಪ್ರಮಾಣ ಪತ್ರ ಮತ್ತು ಇನ್ನು ಹಲವಾರು ಘೋಷವಾರೆಯನ್ನು ತಯಾರಿಸಿ ಕೇಂದ್ರ ಕಚೇರಿಗೆ ಸಲ್ಲಿಸಲು ಬೇಕಾದ ಅರ್ಜಿ ಪ್ರಮಾಣ ಪತ್ರಗಳನ್ನು ಈ ಬ್ಲಾಗ್ ನಲ್ಲಿ ನನ್ನ ಅನುಭವದ ಹಿನ್ನಲೆಯಲ್ಲಿ ಲಗತ್ತಿಸಿದ್ದೆನೇ ಇದರಿಂದ ಒಬ್ಬರಿಗಾದರೂ ಅನುಕೂಲವಾದರೆ ಅದೇ ಸಂತೋಷ. ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಿಬ್ಬಂದಿಯ ಸಲಹೆ ಪಡೆದು ತಮ್ಮ ಪರಿವೀಕ್ಷಣಾ ಅವಧಿಯ ಘೋಷಣೆ ಮಾಡಿಕೊಳ್ಳಲು ನನ್ನ ಒಂದು ಸಣ್ಣ ಪ್ರಯತ್ನ.ಅವಶ್ಯವಾಗಿ ಲಗತ್ತಿಸಬೇಕಾದ ದಾಖಲೆಗಳು:
- ಮೂಲ ಸೇವಾ ಪುಸ್ತಕ (ಪ್ರಾಂಶುಪಾಲರಿಂದ ದೃಡೀಕರಿಸಲ್ಪಟ್ಟಿರಬೇಕು)
- ಇಲಾಖಾ ಪರೀಕ್ಷಾ ಉತ್ತೀರ್ಣತಾ ಪ್ರಮಾಣ ಪತ್ರ (ಮೂಲ ಮತ್ತು ದೃಡೀಕೃತ ನಕಲು ಪ್ರತಿ)
- ಕನ್ನಡ ಭಾಷಾ ಪರೀಕ್ಷಾ ವಿನಾಯಿತಿ ಪ್ರಮಾಣ ಪತ್ರ ನಮೂನೆ- ೨
- ಸಿಂದುತ್ವ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
- ಎರಡು ವರ್ಷಗಳ ಗೌಪ್ಯತಾ ಪ್ರಮಾಣ ಪತ್ರ
- ಎರಡು ವರ್ಷಗಳ ಚಿರಾಸ್ತಿ ಮತ್ತು ಚರಾಸ್ಥಿ ಪ್ರಮಾಣ ಪತ್ರ
- ಇಲಾಖಾ ವಿಚಾರಣೆ ಬಾಕಿ ಇಲ್ಲದಿರುವ ಕುರಿತು ಪ್ರಮಾಣ ಪತ್ರ
- ಸ್ವ-ಗ್ರಾಮ ಘೋಷಣೆ ಪ್ರಮಾಣ ಪತ್ರ
ಇನ್ನು ಚೆಕ್ ಲಿಸ್ಟ್ ನಂತೆ ಅವಶ್ಯವಿರುವ ದಾಖಲೆಗಳನ್ನು ಪಡೆಯಬಹುದಾಗಿದೆ.
No comments:
Post a Comment